V.V. Sangha's
Smt. Allum Sumangalamma Memorial College for Women, Ballari.
(Affiliated to Karnataka State Akkamahadevi Women’s University, Vijayapura.)
AISHE CODE: C-8690, NAAC TRACK ID-KACOGN11970.
Recognized under sections 2(f) and 12(B) of the UGC Act 1956.
(Accredited by NAAC in IV Cycle)
Internal Quality Assurance Cell (IQAC)
College Annual Day (Talents' Day-2026) was celebrated at the Auditorium on 09.05.2026.
Cultural programmes conducted in the college's annual day function @ the auditorium on 09.05.2026
Social Media Web link--> https://www.facebook.com/share/p/17mT7yjHDc/
Please click on the following web link for the --> 2025-26 Academic Year Winners List (All Events)
College Annual Day & Valedictory Function of various Cultural Associations for the academic year 2025-26
Glimpse of Photos
![]() |
![]() |
![]() |
![]() |
![]() |
![]() |
![]() |
![]() |
|
ದಿನಾಂಕ:09-05-2026ರಂದು ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದಲ್ಲಿ ಪ್ರತಿಭಾ ದಿನಾಚರಣೆ ಹಾಗೂ ವಿವಿಧ ಸಾಂಸ್ಕೃತಿಕ ಸಂಘಗಳ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎಂ. ಮರಿದೇವಯ್ಯ ರವರು ವಹಿಸಿಕೊಂಡಿದ್ದರು. ಶ್ರೀಮತಿ ಎಂ.ಎ ಮಾಬುನ್ನಿಸಾ ಬೇಗo ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎಂ. ಮರಿದೇವಯ್ಯ, ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಜಿ.ಎಂ. ಪರ್ವತೀಶ, ಡಾ. ಹೆಚ್.ಕೆ. ಚೇತನ, ಶ್ರೀಮತಿ ಎಂ.ಎ ಮಾಬುನ್ನಿಸಾ ಬೇಗಂ, ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದೂಪಂ ಸತೀಶ, ಮಹಾವಿದ್ಯಾಲಯದ IQAC ಸಂಯೋಜಕರಾದ ಡಾ. ಸಾಹಿದ ಕೆ. ತನ್ವೀರ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ ಗೋವಿಂದರಾಜ ಮುಂತಾದವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀಮತಿ ಮಾಬುನ್ನಿಸಾ ಬೇಗಂ ಸಮಾಜದಲ್ಲಿ ಹುಟ್ಟಿದ ಬಳಿಕ ಕಷ್ಟ-ದುಃಖ, ನಿಂದನೆಗಳು ಬರುವುದು ಸಹಜ. ಆದರೆ ಅವುಗಳನ್ನೇ ನೆಪಮಾಡಿಕೊಳ್ಳದೇ ಸಾಧನೆಗಳತ್ತ ಸಾಗಬೇಕು ಎಂದು ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿದರು. ತಮ್ಮ ಆರಂಭಿಕ ಜೀವನದಲ್ಲಿ ಅನುಭವಿಸಿದ ಕಷ್ಟಗಳನ್ನು ವಿದ್ಯಾರ್ಥಿನಿಯರಿಗೆ ಹೇಳುವುದರ ಮೂಲಕ ಪ್ರೇರಣೆ ನೀಡಿದರು. 2024-25ನೇ ಶೈಕ್ಷಣಿಕ ಸಾಲಿನಲ್ಲಿ ನಮ್ಮ ಮಹಾವಿದ್ಯಾಲಯಕ್ಕೆ 9 ರ್ಯಾಂಕ್ ಗಳನ್ನು ಪಡೆದ ವಿದ್ಯಾರ್ಥಿನಿಯರಿಗೆ ವೀರಶೈವ ವಿದ್ಯಾವರ್ಧಕ ಸಂಘವು ತಲಾ 5000 ರೂಪಾಯಿಗಳನ್ನು ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಶ್ರೀಮತಿ ಕಾತ್ಯಾಯಿನಿ ಎಂ. ಮರಿದೇವಯ್ಯ ರವರು ಬದುಕಿನಲ್ಲಿ ಭರವಸೆ ಅತಿ ಪ್ರಮುಖವಾದದ್ದು. ನಿಮ್ಮ ಸಂಪೂರ್ಣ ಪ್ರಯತ್ನ ನಿಮ್ಮ ಕೆಲಸದ ಮೇಲಿದ್ದರೆ ನೀವು ವಿಫಲವಾಗಲು ಸಾಧ್ಯವೇ ಇಲ್ಲ ಎನ್ನುವ ಮಾತುಗಳನ್ನು ತಮ್ಮ ಅಧ್ಯಕ್ಷತೆಯ ನುಡಿಗಳ ಮೂಲಕ ತಿಳಿಸಿದರು. 2025-26ನೇ ಶೈಕ್ಷಣಿಕ ಸಾಲಿನ ವಾರ್ಷಿಕ ವರದಿಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ದೂಪಂ ಸತೀಶ ರವರು ಓದಿದರು. ಆಂಗ್ಲ ವಿಭಾಗದ ಮುಖ್ಯಸ್ಥರಾದ ಶ್ರೀ ವಿಜಯೇಂದ್ರ ರಂಗ ಪ್ರಸಾದ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.IQAC ಸಹ ಸಂಯೋಜಕರಾದ ಡಾ. ಭೀಮನಗೌಡ ಪಾಟೀಲ್ ರವರು ಮುಖ್ಯ ಅತಿಥಿಗಳನ್ನು ಸ್ವಾಗತ ಮಾಡಿದರು. ಕಾರ್ಯಕ್ರಮದ ಅತಿಥಿಗಳನ್ನು ಡಾ.ಬಿಂದುರವರು ಪರಿಚಯಿಸಿದರು. IQAC ಸಂಯೋಜಕರಾದ ಡಾ. ಸಾಹಿದ ಕೆ. ತನ್ವೀರ್ ರವರು ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಡಾ. ಬಸವರಾಜೇಶ್ವರಿ ಇವರು ವಂದನಾರ್ಪಣೆಯನ್ನು ಮಾಡಿದರು. ಡಾ. ಸುವರ್ಣಮ್ಮ ಡಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಾಂಸ್ಕೃತಿಕ ಸಂಘದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ಮಹಾವಿದ್ಯಾಲಯದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರು, ಕಾಲೇಜು ಆಡಳಿತ ಮಂಡಳಿಯ ಸದಸ್ಯರು, ಮಹಾವಿದ್ಯಾಲಯದ ಪ್ರಾಂಶುಪಾಲರು, ಸಾಂಸ್ಕೃತಿಕ ಸಂಘದ ಸಂಚಾಲಕರು, ಸದಸ್ಯರುಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿನಿಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ತಂಡದವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.








