V.V.Sangha's
Smt. A.S.M. College for Women, Ballari (Estd.: 1969)
(Affiliated to Karnataka State Akkamahadevi Women’s University, Vijayapura.)
AISHE CODE: C-8690, NAAC TRACK ID-KACOGN11970
Recognized under sections 2(f) and 12(B) of the UGC Act 1956
(Accredited by NAAC in IV Cycle)
Internal Quality Assurance Cell (IQAC)
"Kittur Rani Chennamma Jayanthi" was celebrated by History Department in association with
NSS -'A' & 'B' Units & Smt. Allum Sumangalamma Rangers Unit on 23.10.2025 at Room No.: 20.
Social Media Web Link --> https://www.facebook.com/share/p/1BjijE8MQJ/

"Kittur Rani Chennamma Jayanti is celebrated on October 23rd, the anniversary of her birth in 1778. She was born in Kakati, near Belgaum, Karnataka, and is remembered for leading an armed rebellion against the British East India Company in 1824."
Please click on the following web link for the --> Report
![]() |
![]() |
"ಶೌರ್ಯ, ಧೈರ್ಯ, ಸಾಹಸಕ್ಕೆ ಹೆಸರಾಗಿದ್ದ ಕ್ರಾಂತಿಯ ಕಿಡಿ, ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿದ್ದ ದಿಟ್ಟೆ, ತಾಯ್ನಾಡಿಗಾಗಿ ಪ್ರಾಣ ಒತ್ತೆ ಇಟ್ಟ ವೀರವನಿತೆ ರಾಣಿ ಚೆನ್ನಮ್ಮ ಅವರ ಜಯಂತಿಯಂದು ಗೌರವ ಪೂರ್ವಕ ನಮನಗಳು."
![]() |
|
ವೀರಶೈವ ವಿದ್ಯಾವರ್ಧಕ ಸಂಘದ ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ, ಬಳ್ಳಾರಿ ದಿನಾಂಕ 23 10 2025ರಂದು ಸ್ವಾತಂತ್ರ ಹೋರಾಟಗಾರ್ತಿ ಹಾಗೂ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ 247ನೇ ಜನ್ಮ ದಿನಾಚರಣೆಯನ್ನು ಮಹಾವಿದ್ಯಾಲಯದ ಇತಿಹಾಸ ವಿಭಾಗ ಮತ್ತು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರೇಂಜರ್ ಯೂನಿಟ್ ಸಹಯೋಗದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಧೂಪಂ ಸತೀಶ್ ಸರ್ ಅವರು ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಶ್ರೀ ರಾಮಲಿಂಗ ಟಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರೇಂಜರ್ ರೇಂಜರ್ ಯೂನಿಟ್ ನ ಮುಖ್ಯಸ್ಥರಾದ ಡಾ. ಮಂಗಳ ಬಿ ಎನ್, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸುವರ್ಣಮ್ಮ ಡಿ, ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ಬಸವರಾಜ ಹೂಗಾರ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಸುಂದರ್ಮೂರ್ತಿ ಟಿ, ಅರ್ಥಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ಪೂರ್ಣಿಮಾ, ಹಾಗೂ ಎಲ್ಲಾ ವಿಭಾಗದ ಉಪನ್ಯಾಸಕರು, ರೇಂಜರ್ ವಿದ್ಯಾರ್ಥಿನಿಯರು ಮಹಾವಿದ್ಯಾಲಯದ ವಿದ್ಯಾರ್ಥಿನಿಯರು, ಉಪಸ್ಥಿತರಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಶ್ರೀ ರಾಮಲಿಂಗ ಟಿ ಅವರು ಕಿತ್ತೂರು ರಾಣಿ ಚೆನ್ನಮ್ಮನ ಜೀವನ ಮತ್ತು ಸಾಧನೆಗಳನ್ನು ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು, ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾಕ್ಟರ್ ಧೂಪಂ ಸತೀಶ್ ಸರ್ ಅವರು ಕಿತ್ತೂರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ದೇವಿ, ಜಾನ್ಸಿ ರಾಣಿ ಲಕ್ಷ್ಮೀಬಾಯಿ ಇವರೆಲ್ಲರ ಉದಾಹರಣೆ ಹೇಳುತ್ತಾ ಇವರ ಧೈರ್ಯ ಸಾಹಸವನ್ನು ವಿದ್ಯಾರ್ಥಿನಿಯರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಸ್ಯೆಗಳನ್ನು ಎದುರಿಸಬೇಕು ಎಂದು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ತಿಳಿಸಿದರು. ಬಿ ಎ ಪ್ರಥಮ ವರ್ಷದ ವಿದ್ಯಾರ್ಥಿನಿ ಪ್ರತಿಕ್ಷ ಅತಿಥಿಗಳನ್ನು ಸ್ವಾಗತಿಸಿದರು, ಹಾಗೆ ಕಾರ್ಯಕ್ರಮದ ನಿರೂಪಣೆಯನ್ನು ಬಿ ಎ ತೃತಿಯ ವರ್ಷದ ವಿದ್ಯಾರ್ಥಿನಿ ಕೀರ್ತನ ಬಾಯಿ ನೆರವೇರಿಸಿದರು ಮತ್ತು ಬಿ ಎ ಪ್ರಥಮ ವರ್ಷದ ವಿದ್ಯಾರ್ಥಿನಿ ವಂದನಾರ್ಪಣೆಯನ್ನು ಸಲ್ಲಿಸಿದರು.