Latest News & e-Newsletter

 

Veerasaiva Vidyavardhaka Sangha's 

Smt. Allum Sumangalamma Memorial College for Women, Ballari. 

(Affiliated to Karnataka State Akkamahadevi Women’s University, Vijayapura.)

 AISHE CODE: C-8690, NAAC TRACK ID-KACOGN11970. 

Recognized under sections 2(f) and 12(B) of the UGC Act 1956.

(Accredited by NAAC in IV Cycle) 

Internal Quality Assurance Cell (IQAC)

Smt. Allum Sumangalamma Rangers Unit observed "World Scarf Day" on 01.08.2026

Social Media Web Link ---> https://www.facebook.com/share/p/1Cy8feQ72t/

 760444344 1747127046603220 7899429492006519881 n

Please click on the following web link for the --> World Scarf Day Report

ವಿಶ್ವ ಸ್ಕೌಟ್ ಸ್ಕಾರ್ಫ್ ದಿನಾಚರಣೆ-01.08.2026

 762512978 1747127076603217 2286456225720142918 n

ವೀರಶೈವ ವಿದ್ಯಾವರ್ಧಕ ಸಂಘದ ಶ್ರೀಮತಿ ಅಲ್ಲಂ ಸುಮಂಗಳಮ್ಮ ಮಹಿಳಾ ಸ್ಮಾರಕ ಮಹಾವಿದ್ಯಾಲಯ, ಬಳ್ಳಾರಿ, ದಿನಾಂಕ: 01.08.2026ರಂದು ಶ್ರೀಮತಿ ಅಲ್ಲಂ ಸುಮಂಗಳಮ್ಮ ರೇಂಜರ್ ಯೂನಿಟ್ ವತಿಯಿಂದ ಸ್ಕಾರ್ಫ್ ದಿನ ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ಉದಯವಾದ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಧೂಪಂ ಸತೀಶ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪದವಿ ಪೂರ್ವ ಮಹಾವಿದ್ಯಾಲಯದ ಡಾ.ಗೋವಿಂದರಾಜ ಬಿ ಇವರು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ರೇಂಜರ್ ವಿಭಾಗದ ಮುಖ್ಯಸ್ಥರಾದ ಡಾ. ಮಂಗಳ ಬಿ ಎನ್, IQAC ಸಂಯೋಜಕರಾದ ಡಾ. ಸೈದಾ ತನ್ವೀರ್, IQAC ಸಹ ಸಂಯೋಜಕರಾದ ಡಾ. ಭೀಮನ ಗೌಡ ಪಾಟೀಲ್, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸುವರ್ಣಮ್ಮ ಡಿ, ಸಸ್ಯ ಶಾಸ್ತ್ರ ವಿಭಾಗದ ಅಧ್ಯಾಪಕರಾದ ಡಾ. ಬಸವರಾಜೇಶ್ವರಿ, ಕನ್ನಡ ವಿಭಾಗದ ಉಪನ್ಯಾಸಕರಾದ ಸತೀಶ್ ಜಗ್ಗಣ್ಣನವರ್, ರೇಂಜರ್ ವಿದ್ಯಾರ್ಥಿನಿಯರು ಮತ್ತು ಹೊಸದಾಗಿ ರೇಂಜರ್ ವಿಭಾಗಕ್ಕೆ ಸೇರುವ ಆಕಾಂಕ್ಷಿಗಳು ಭಾಗವಹಿಸಿದ್ದರು. ಸ್ಕೌಟ್ಸ್ ಅಂಡ್ ಗೈಡ್ಸ್ ಸ್ಥಾಪಕರಾದ ರಾಬರ್ಟ್ ಬೆಡನ್ ಪೊವೆಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ರೇಂಜರ್ ಘಟಕದ ಮುಖ್ಯಸ್ಥರಾದ ಡಾ. ಮಂಗಳ ಬಿ ಎನ್ ಅವರು ಹೇಳಿದರು. ಮುಖ್ಯ ಅತಿಥಿಗಳಾದ ಡಾ. ಗೋವಿಂದರಾಜ್ ಬಿ ಅವರು ಸ್ಕೌಟ್ಸ್ ಅಂಡ್ ಗೈಡ್ಸ್ ನ ಹುಟ್ಟು ಬೆಳವಣಿಗೆಯನ್ನು ಮತ್ತು ಮಹತ್ವವನ್ನು ತಿಳಿಸಿದರು. IQAC ಸಂಯೋಜಕರಾದ ಡಾ. ಸೈದಾ ರವರು ಸಮಾಜ ಸೇವೆಯ ಮಹತ್ವ ಮತ್ತು ರೇಂಜರ್ ವಿಭಾಗದ ಕಾರ್ಯವೈಖರಿ ಕುರಿತು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಧೂಪಂ ಸತೀಶ್ ಸರ್ ಅವರು ರೇಂಜರ್ ವಿದ್ಯಾರ್ಥಿನಿಯರ ಇದುವರೆಗಿನ ಕಾರ್ಯವನ್ನು ಶ್ಲಾಘಿಸಿದರು ಮತ್ತು ರೇಂಜರ್ ನ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಶುಭ ಹಾರೈಸಿದರು. ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿನಿಯರಿಗೆ ವೇದಿಕೆಯ ಎಲ್ಲಾ ಗಣ್ಯರು ಸ್ಕಾರ್ಫ್ ಹಾಕಿ ರೇಂಜರಿಂಗ್ ವಿಭಾಗಕ್ಕೆ ಸ್ವಾಗತ ಕೋರಿ ಶುಭ ಹಾರೈಸಿದರು. ಬಿ ಎ ತೃತೀಯ ವಿಭಾಗದ ವಿದ್ಯಾರ್ಥಿನಿ ಕೆ . ರಕ್ಷಿತಾ ಪ್ರತಿಜ್ಞಾ ವಿಧಿಯನ್ನು ನೆರವೇರಿಸಿದರು ಮತ್ತು ಬಿ ಎ ತೃತೀಯ ವಿಭಾಗದ ಕು. ಐಸಿರಿ G ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

760671483 1747126939936564 8447067519216588541 n

 

Contact Address

Smt. Allum Sumangalamma Memorial College for Women

Sri Togari Veerappanavara
Datti Avarana, Allum Sumangalamma Road,
1st Cross, Gandhi Nagar 1st,
Ballari 583103

Phone

08392-256756 / 08392-257624

Email

iqacasmc@gmail.com / smtasmc@gmail.com